BREAKING

Dropdown with Dependent Values
ಚಿತ್ರದುರ್ಗಶಿರಹಟ್ಟಿ

ಜನರಿಂದ ಅನುಕಂಪ ಗಿಟ್ಟಿಸಿಕೊಳ್ಳಲು ದೊಂಬರಾಟ ಆಡ್ತಿದ್ದಾರೆ: JDS ವಿರುದ್ಧ ಕದಲೂರು ಉದಯ್ ವಾಗ್ದಾಳಿ

 

ಮದ್ದೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಆಗಿರೋದು ಪೂರ್ವ ನಿಯೋಜಿತವಾಗಿದೆ. ಜನರಿಂದ ಅನುಕಂಪ ಗೀಟಿಸಿಕೊಳ್ಳಲು ದೊಂಬರಾಟ ಆಡಿದ್ದು ಜನರಿಗೆ ಗೊತ್ತಿದೆ ಎಂದು ಜೆಡಿಎಸ್ ವಿರುದ್ದ ಶಾಸಕ ಕದಲೂರು ಉದಯ್ ವಾಗ್ದಾಳಿ ನಡೆಸಿದ್ದಾರೆ.

ಮದ್ದೂರಿನಲ್ಲಿಂದು ಶಾಸಕ ಕದಲೂರು ಉದಯ್ ಮಾತನಾಡಿ, ಕಾಂಗ್ರೆಸ್ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಬಡವರ ಪರ ಒಳ್ಳೆಯ ಕೆಲಸ ಮಾಡ್ತಿದೆ‌ ಡಿಸಿಎಂ ಡಿ ಕೆ ಶಿವಕುಮಾರ್ ಸಾವಿರಾರು ಕೋಟಿ ಅನುದಾನ ಕೊಟ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಯೋಗೇಶ್ವರ್ ನೀರು ಕೊಡುವ ಕೆಲಸ ಮಾಡಿದ್ದಾರೆ. ಜನರು ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ ಗೆಲ್ಲಿಸುತ್ತಾರೆ ಎಂದರು.
ಇನ್ನು ಮೈತ್ರಿ ಬಗ್ಗೆ ನಮಗೆ ಆತಂಕ ಇಲ್ಲ ಎಂದ ಅವರು, ಜನರು ನಮ್ಮ ಪರ ಇದ್ದಾರೆ ನಾವು ಚುನಾವಣೆ ಗೆಲ್ತೇವೆ‌. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗಿರೋದು ಪೂರ್ವ ನಿಯೋಜಿತ ವಾಗಿದ್ದು, ಜನರ ಹತ್ತಿರ ಅನುಕಂಪ ಗಿಟಿಸಿಕೊಳ್ಳಲು ದೊಂಬರಾಟ ಆಡ್ತಿದ್ದಾರೆ‌. ಬಹಳಷ್ಟು ಜನರಿಗೆ ಇವರ ದೊಂಬಾರಾಟ ಗೊತ್ತಿದೆ‌ ಎಂದು ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

Leave A Reply

Your email address will not be published. Required fields are marked *

Related Posts

No Content Available