BREAKING

Dropdown with Dependent Values
ಉತ್ತರ ಕನ್ನಡಭಟ್ಕಳ

ಸಹಕಾರ ನೋಟ 547 ಸಂಘದ ಆಶ್ವಾಸನ ನಿಧಿ

ಕೃಷಿ ಹಾಗೂ ಗ್ರಾವಿಣ ಅಭಿವೃದ್ಧಿ ಬ್ಯಾಂಕುಗಳ ಪರ ಆದ ಪರಭಾರೆಗೆ ೧೯೪೭ರ ಮುಂಬೈ ೨೮ನೆಯ ಅಧಿನಿಯಮದ ೪೦ನೆಯ ಪ್ರಕರಣವು ಅನ್ವಯಿಸತಕ್ಕುದಲ್ಲ. ಮುಂಬೈ ಕೃಷಿ ಸಾಲಗಾರರ ಋಣ ಪರಿಹಾರ ಅಧಿನಿಯಮ, ೧೯೪೭ರ ೪೦ನೆಯ ಪ್ರಕರಣದಲ್ಲಿ ಅಥವಾ ರಾಜ್ಯದ ಯಾವುದೇ ಭಾಗದಲ್ಲಿ ತತ್ಕಾಲದಲ್ಲಿ ಜಾರಿಯಲ್ಲಿದ್ದ ಯಾವುದೇ ಸಂವಾದಿ ವಿಧಿಯಲ್ಲಿ ಇರುವುದು ಯಾವುದೂ, ಕೃಷಿ ಹಾಗೂ ಗ್ರಾವಿಣ ಅಭಿವೃದ್ಧಿ ಬ್ಯಾಂಕುಗಳ ಪರವಾಗಿನ ಯಾವುದೇ ಪರಭಾರೆಗೆ ಅನ್ವಯಿಸತಕ್ಕುದಲ್ಲ. ೮೯ಹೆಚ್. ಕೆಲವೊಂದು ನಷ್ಟಗಳನ್ನು ತುಂಬಲು ಆಶ್ವಾಸನಾ ನಿಧಿಗಳ ಏರ್ಪಾಡು. (೧) ರಾಜ್ಯ ಸರ್ಕಾರವು, ಸ್ಥಿರ ಸ್ವತ್ತಿನ ಹಕ್ಕುಗಳ ಮೇಲೆ ಕೃಷಿ ಹಾಗೂ ಗ್ರಾಮಿಣ ಅಭಿವೃದ್ಧಿ ಬ್ಯಾಂಕು ಗಳಿಂದ ಸಾಲಗಳು ಕೊಡಲ್ಪಟ್ಟು ತದನಂತರ ಆ ಹಕ್ಕುಗಳು ದೋಷಯುಕ್ತವಾದವುಗಳೆಂದು ಕಂಡುಬಂದುದರ ಪರಿಣಾಮವಾಗಿ ಉದ್ಭವಿಸಬಹು ದಾದ ನಷ್ಟಗಳನ್ನು ತುಂಬುವುದಕ್ಕಾಗಿ ಅಥವಾ ಈ ಅಧ್ಯಾಯದ ಇತರ ಯಾವುದೇ ಉದ್ದೇಶಕ್ಕಾಗಿ ರಾಜ್ಯಸರ್ಕಾರದ ಅಭಿಪ್ರಾಯದಲ್ಲಿ ಒಂದು ಪ್ರತ್ಯೇಕವಾದ ಖಾತರಿ ನಿಧಿಯನ್ನು ಏರ್ಪಡಿಸುವುದು ಅಥವಾ ಸೃಜಿಸುವುದು ಅವಶ್ಯಕವಿದ್ದರೆ ಅದು ಯೋಗ್ಯವೆಂದು ೧೦೭ ಭಾವಿಸುವಂಥ ನಿರ್ಬಂಧಗಳ ಮತ್ತು ಷರತ್ತುಗಳ ಮೇರೆಗೆ ಅಂಥ ಒಂದು ಅಥವಾ ಹೆಚ್ಚು ಆಶ್ವಾಸನ ನಿಧಿಗಳನ್ನು ರಚಿಸಲು ಸಕ್ಷಮವಾಗಿರತಕ್ಕುದು.

 

ಇದು ಸಿಎಂ ದೊಡ್ಡ ಗುಣ ಎಂದು ಸಿಪಿ ಯೋಗೇಶ್ವರ್‌ ಸಿಎಂ ಸಿದ್ದರಾಮಯ್ಯ ಅವರ ಬಗೆಗೆ ಇಂದು ಪ್ರತಿಕ್ರಿಯೆ ನೀಡಿದ್ದಾರೆ. 

ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಪಿ ಯೋಗೇಶ್ವರ್, ನಾನು ಕಾಂಗ್ರೆಸ್ ಪಕ್ಷದ ಯಾವ ನಾಯಕರನ್ನೂ ಭೇಟಿ ಆಗಿಲ್ಲ. ನನ್ನನ್ನೂ ಯಾರೂ ಸಂಪರ್ಕ ಮಾಡಿಲ್ಲ ಎಂದರು. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಪಿ ಯೋಗೇಶ್ವರ್, ಇದು ಸಿಎಂ ದೊಡ್ಡಗುಣ ಎಂದಿದ್ದಾರೆ.

ಇನ್ನು ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಮೈತ್ರಿ ಟಿಕೆಟ್ ಕೈತಪ್ಪುವ ಸಂಭವ ಹಿನ್ನೆಲೆಯಲ್ಲಿ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಸಿ.ಪಿ ಯೋಗೇಶ್ವರ್ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಮಾತನಾಡಿ, ನಿನ್ನೆ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಇಂದು ಬೆಂಬಲಿಗರ ಜೊತೆ ಸುದೀರ್ಘವಾಗಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು.

Leave A Reply

Your email address will not be published. Required fields are marked *

Related Posts