BREAKING

Dropdown with Dependent Values
Uncategorized

ಸಿಪಿ ಯೋಗೇಶ್ವರ್‌ ಒಬ್ಬ ಫ್ರಾಡ್‌, ಸೈನಿಕ ಎಂದು ಸೈನಿಕರಿಗೆ ಅಪಮಾನ ಮಾಡಬಾರದು: ಎಚ್‌ ವಿಶ್ವನಾಥ್‌ ಕಿಡಿ

ಮೈಸೂರು: ಸಿ ಪಿ ಯೋಗೇಶ್ವರ್ ಒಬ್ಬ ಫ್ರಾಡ್. ಯೋಗೇಶ್ವರ್ ನನ್ನು ಸೈನಿಕ ಎನ್ನಬಾರದು. ಸೈನಿಕ ಎನ್ನುವ ಮೂಲಕ ಸೈನಿಕರಿಗೆ ಅಪಮಾನ ಮಾಡಬಾರದು ಎಂದು ಮೈಸೂರಿನಲ್ಲಿ ಸಿಪಿ ಯೋಗೇಶ್ವರ್‌ ವಿರುದ್ಧ ಎಂ ಎಲ್‌ ಸಿ ಎಚ್‌ ವಿಶ್ವನಾಥ್‌ ಕಿಡಿಕಾರಿದ್ದಾರೆ. 

ನಗರದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿ ಪಿ ಯೋಗೇಶ್ವರ್ ಒಬ್ಬ ಫ್ರಾಡ್. ಯೋಗೇಶ್ವರ್ ನನ್ನು ಸೈನಿಕ ಎನ್ನಬಾರದು. ಸೈನಿಕ ಎನ್ನುವ ಮೂಲಕ ಸೈನಿಕರಿಗೆ ಅಪಮಾನ ಮಾಡಬಾರದು. ಈಗಾಗಲೇ ಮುಡಾ, ವಾಲ್ಮೀಕಿ ಫ್ರಾಡ್ ಜೊತೆಗೆ ಯೋಗೇಶ್ವರ್ ಎಂಬ ಮೂರನೇ ಫ್ರಾಡ್ ಸೇರಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳ ಉಪಚುನಾವಣೆಯಿಂದ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

 ಭೈರತಿ ಸುರೇಶ್ ಒಳಗೆ ಹಾಕಿದ್ರೆ ಎಲ್ಲಾ ವಿಚಾರ ಹೊರಗೆ ಬರುತ್ತದೆ

ನಿನ್ನೆ ನಡೆದಿದ್ದು 500 ಕೋಟಿ ಶಿಲನ್ಯಾಸ ಕಾರ್ಯಕ್ರಮನಾ ಅಥವಾ ಸ್ಪಷ್ಟೀಕರಣ ಕೊಡುವ ಕಾರ್ಯಕ್ರಮನಾ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಏನು ಮಾಡ್ತಾ ಇದ್ದಾರೆ ಎನ್ನೋದೆ ಅರ್ಥವಾಗುತ್ತಿಲ್ಲ.
ನಾನು ಸತ್ಯವಂತ, ಸತ್ಯವಂತ ಎಂದು ಹೇಳ್ತಿದ್ದಾರೆ ಆದರೆ ನೀವು ಎಷ್ಟೇ ಹೇಳಿದರೂ ಸಿದ್ದರಾಮಯ್ಯ ಭ್ರಷ್ಟ ಅಂತ ಜನ ತೀರ್ಮಾನ ಮಾಡಿದ್ದಾರೆ. ಮನೆ ಇಲ್ಲ, ಮರಿಸ್ವಾಮಿ ಮನೇಲಿ ಮಲಗಿಕೊಳ್ತೀನಿ ಅಂತೀರಾ.
ಇದೆಲ್ಲ ಹೇಳುವ ಮಾತುಗಳಾ. ನೀವು ಭ್ರಷ್ಟ ಅಂತ ಜನ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಮಗ ಸೊಸೆ ಹೆಸರಿನಲ್ಲಿ ಪಬ್ ಮಾಡಿದ್ದಾರೆ. ಅದು 350 ಕೋಟಿ ಬೆಲೆ ಬಾಳುತ್ತದೆ. ಅದಕ್ಕೆ ಬೈರತಿ ಸುರೇಶ್ ಮಾಸ್ಟರ್ ಮೈಂಡ್. ಅವನ ಕ್ಷೇತ್ರದಲ್ಲೇ ಆ ಪಬ್ ಇದೆ‌. ಸಿದ್ದರಾಮಯ್ಯ ನಾನು ಒಳ್ಳೆಯವನು ಎಂದು ಡಂಗೂರ ಹೊಡೆಯುತ್ತಿದ್ದಾರೆ. ಆದರೆ ಅವರ ಸಾಚಾತನ ಜನಕ್ಕೆ ಗೊತ್ತಾಗಿದೆ. ಭೈರತಿ ಸುರೇಶ್ ಒಳಗೆ ಹಾಕಿದ್ರೆ ಎಲ್ಲಾ ವಿಚಾರ ಹೊರಗೆ ಬರುತ್ತದೆ ಎಂದು ಎಂಎಲ್ಸಿ., ಎಚ್ ವಿಶ್ವನಾಥ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.‌

ವರುಣದಲ್ಲಿ ಸಿಎಂ ಸಿದ್ದರಾಮಯ್ಯ ನಿನ್ನೆ ನಡೆಸಿರುವುದು ಸ್ಪಷ್ಟೀಕರಣ ಸಭೆಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ತಮ್ಮ‌ ಮೇಲಿನ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದೀರಾ.
ಈಗ ಏನೇ ಹೇಳಿದರೂ ರಾಜ್ಯದ ಜನರು ನಂಬುವುದಿಲ್ಲ. ಭೈರತಿ ಸುರೇಶ್ ನಂತಹ ಅಯೋಗ್ಯನನ್ನು ಮಂತ್ರಿ ಮಾಡಿಕೊಂಡು ರಾಜ್ಯಕ್ಕೆ ಮಸಿ ಬಳಿದಿದ್ದೀರಿ. ಕರ್ನಾಟಕ ಅಂದರೇ ಫ್ರಾಡ್ ಗಳ ಸಂತೆ ಆಗಿ ಹೋಗಿದೆ.
ಇದಕ್ಕೆ ಸಿಎಂ ಸಿದ್ದರಾಮಯ್ಯ ನೇರ ಕಾರಣ. ಜೈಲಿಗೆ ಹೋಗಿ ಬಂದ ಒಬ್ಬ ಮಂತ್ರಿಗೆ ಮೈಸೂರುಪೇಟ, ಹಾರ ಹಾಕಿ ಸ್ವಾಗತ ಮಾಡಿದ್ದೀರಿ. ನಿಮ್ಮನ್ನು ವಾಲ್ಮೀಕಿ ಸಮುದಾಯದ ಜನರು ನಂಬುವುದಿಲ್ಲ.
ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿಲ್ಲ, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

– ಜಾಹೀರಾತು –

ರಾಜ್ಯದ ವಿಪತ್ತು ನಿವಾರಿಸುವಲ್ಲಿ ರಾಜ್ಯ ಸರ್ಕಾರ ವಿಫಲ

ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬಂದೊದಗಿರುವ ಎದುರಾಗಿರುವ ವಿಪತ್ತು ನಿವಾರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸಿಎಂ ಆದಿಯಾಗಿ ಯಾವುದೇ ಸಚಿವರು ಜನರ ಸಮಸ್ಯೆಗಳತ್ತ ಗಮನ ಹರಿಸಿಲ್ಲ. ಮೂರು ಪಕ್ಷಗಳ ನಾಯಕರು ಉಪ ಚುನಾವಣೆಯತ್ತ ಗಮನ ಹರಿಸಿದ್ದಾರೆ.ಜನರ ಕಷ್ಟಕ್ಕೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದರು.

ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರವನ್ನು ಹಾಳು ಮಾಡುತ್ತಿದ್ದಾರೆ

ನಾನು ಕೂಡ ಮೂರು ಪಾರ್ಟಿಗಳಲ್ಲಿ ಗುರ್ತಿಸಿಕೊಂಡಿದ್ದೇನೆ, ಆದರೆ ನಾನು ಎಂದಿಗೂ ನನ್ನ ತತ್ವ ಸಿದ್ದಾಂತ ಬಿಟ್ಟಿಲ್ಲ. ಜಂಡಾ ಬಿಟ್ಟರೂ ಅಜೆಂಡಾ ಬಿಟ್ಟಿಲ್ಲ. ಇತ್ತೀಚೆಗೆ ಪಕ್ಷ ರಾಜಕಾರಣದ ಬದಲು ವ್ಯಕ್ತಿ ರಾಜಕಾರಣ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

Leave A Reply

Your email address will not be published. Required fields are marked *

Related Posts