BREAKING

Dropdown with Dependent Values
Uncategorized

60 ದಿನ ಕಳೆದರೂ ಒಂದಿಂಚು ಕುಸಿಯದ ಕೆ ಆರ್‌ ಎಸ್‌ ಜಲಾಶಯದ ನೀರಿನ ಮಟ್ಟ

ಮಂಡ್ಯ, ನವೆಂಬರ್‌ 15, 2024 : ಕನ್ನಂಬಾಡಿ ಕಟ್ಟೆ ತುಂಬಿ ತುಳುಕುತ್ತಿದೆ. 60 ದಿನ‌ ಕಳೆದರೂ ಒಂದಿಂಚು ಕುಸಿಯದ KRS ಡ್ಯಾಂ ನೀರಿನ‌ ಮಟ್ಟ ಹಾಗೆ ಉಳಿದಿದೆ.

60 ದಿನಗಳ ವರೆಗೆ ಗರಿಷ್ಟ ಅಡಿ ಕಾಯ್ದುಕೊಂಡು ಕೆ.ಆರ್.ಎಸ್ ಡ್ಯಾಂ ದಾಖಲೆ ಬರೆದಿದೆ. ಈ ಬಾರಿ ಉತ್ತಮ ಮಳೆಯಿಂದ ವರ್ಷದಲ್ಲಿ 3 ಬಾರಿ KRS ಡ್ಯಾಂ ಭರ್ತಿಯಾಗಿತ್ತು. ಜುಲೈ-29 ರಂದು KRS ಗೆ ಸಿ.ಎಂ.ಸಿದ್ರಾಮಯ್ಯರಿಂದ ಬಾಗೀನ ಅರ್ಪಣೆ ಆಗಿತ್ತು. ಬಾಗೀನ ಅರ್ಪಣೆಗೂ ಮುನ್ನಾ ಹಾಗೂ ಬಾಗೀನ ಅರ್ಪಣೆ ಬಳಿಕ ಕೂಡ KRS ಡ್ಯಾಂ ಭರ್ತಿಯಾಗಿಯೇ ಉಳಿದು ದಾಖಲೆ ಬರೆದಿದೆ.

ಸೆ-11 ರಿಂದ ಇಲ್ಲಿಯವರೆಗೂ ಡ್ಯಾಂ ನ ಗರಿಷ್ಟ ನೀರಿನ ಮಟ್ಟದಲ್ಲಿ ಸ್ಥಿರತೆ ಹಾಗೆಯೇ ಉಳಿದಿದೆ. 124.80 ಗರಿಷ್ಟ ಅಡಿ ಎತ್ತರದ ಕೆ.ಆರ್.ಎಸ್ ಡ್ಯಾಂ ನೀರಿನ ಸ್ಥಿರತೆಯಿಂದ ರೈತರಲ್ಲಿ ಸಂತಸ ಮನೆಮಾಡಿದೆ. ಮುಂದಿನ ಬೇಸಿಗೆಯಲ್ಲೂ ಕೃಷಿ ಬೆಳೆಗೆ ನೀರು ಸಿಗುವ ವಿಶ್ವಾಸವನ್ನ ರೈತರು ಹೊಂದಿದ್ದಾರೆ. ಬೇಸಿಗೆಯಲ್ಲಿ ಜನ ಜಾನುವಾರು

Leave A Reply

Your email address will not be published. Required fields are marked *

Related Posts