
ಮಂಗಳೂರಿನ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರು ಮೂಲದ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ಭಾನುವಾರ(ನವೆಂಬರ್ 18) ಜರುಗಿದೆ.

ಮೈಸೂರಿನ ಕುರುಬಾರಹಳ್ಳಿ ನಾಲ್ಕ4 ನೇ ಕ್ರಾಸ್ ನಿವಾಸಿ ಎಂ.ಡಿ ನಿಶಿತಾ(21), ರಾಮಾನುಜ ರಸ್ತೆಯ ಎಸ್. ಪಾರ್ವತಿ(20) ಹಾಗೂ ದೇವರಾಜ ಮೊಹಲ್ಲಾದ ಎನ್. ಕೀರ್ತನ(21) ಮೃತರು. ಪ್ರವಾಸಕ್ಕೆಂದು ತೆರಳಿದ್ದ ಮೂವರು ಯುವತಿಯರು, ಭಾನುವಾರ ಬೆಳಗ್ಗೆ 8:30ರ ವೇಳೆಯಲ್ಲಿ ತಾವು ಉಳಿದುಕೊಂಡಿದ್ದ ರೆಸಾರ್ಟ್ ನ ಈಜುಕೊಳದಲ್ಲಿ ಆಟವಾಡುತ್ತಿದ್ದರು.

– ಜಾಹೀರಾತು –
ಸ್ವಿಮ್ಮಿಂಗ್ ಫೂಲ್ ನ ಒಂದು ಬದಿಯಲ್ಲಿ 6 ಅಡಿಯಷ್ಟು ಆಳವಿತ್ತು. ಈ ವೇಳೆ ಫೂಲ್ ನಲ್ಲಿ ಆಟವಾಡಿದ್ದ ಓರ್ವ ಯುವತಿ ಆಯಾತಪ್ಪಿ ನೀರಿನಲ್ಲಿ ಮುಳುಗಿದ್ದು, ಈ ಸಂದರ್ಭದಲ್ಲಿ ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರು ಯುವತಿಯರು ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.


